ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಗೆ ಸ್ವಾಗತ

ಹೊಂಗಿರಣ ಸಂಸ್ಥೆಯು ಉತ್ತಮ ಉದ್ದೇಶ ಇಟ್ಟುಕೊಂಡು ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಗ್ರಾಮದಲ್ಲಿ ಸಾಕ್ಷರತೆಯ ಅರಿವು ಮೂಡಿಸುವುದರಿಂದ, ಸಂಪೂರ್ಣ ಸಾಕ್ಷರ ಗ್ರಾಮವನ್ನಾಗಿ ಮಾಡುತಲಿದೆ. ನೈರ್ಮಲ್ಯಿಕರಣದ ಅಗತ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸುವುದರೊಂದಿಗೆ ಆರೋಗ್ಯ ಶಿಕ್ಷಣವನ್ನು ಒದಗಿಸುವುದು ಒಂದು ಉದ್ದೇಶ. ಊರಿನ ಯುವ ಜನತೆಗೆ ಕ್ರೀಡಾ ಮನೋಭಾವವನ್ನು ಬೆಳೆಸುವುದರೊಂದಿಗೆ ಕ್ರೀಡಾಶಾಲೆಗಳ ಮಾಹಿತಿ ಮತ್ತು ಸಹಾಯ ಒದಗಿಸುವದು ಆಗಿದೆ. ಇದರಿಂದ ಯುವ ಪೀಳಿಗೆಯನ್ನು ದುಶ್ಚಟಗಳಿಂದ ಹಾಳಾಗುವದನ್ನ ತಡೆಯುವುದು ಸಾದ್ಯವಾಗುತ್ತಿದೆ. ನೈತಿಕ ಮೌಲ್ಯದ ಅಭಿವೃದ್ಧಿಸಲುವಾಗಿ ಮತ್ತು ರಾಷ್ಟ್ರ ಪ್ರೇಮ ಬೇಳೆಸಲು ಮಹಾಪುರುಷರ ಪುತ್ಥಳಿಯನ್ನು ಸ್ಥಾಪನೆ ಅವರ ಜಯಂತಿಗಳು ಮತ್ತು ಸ್ಮೃತಿ ದಿನಗಳನ್ನು ಆಚರಿಸುವುದಾಗಿದೆ. ಶೈಕ್ಷಣಿಕ ಅಭಿವೃದಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದು ವೃತ್ತಿ ಮಾರ್ಗದರ್ಶನ ತರಬೇತಿ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಶಿಕ್ಷಣ ಮುಂದವರಿಕೆಗೆ ಸಹಾಯ, ಶಿಷ್ಯವೇತನ ನೀಡುವ ಕಾರ್ಯಕ್ರಮದ ಯೋಜನೆಯಿದೆ. ಮಕ್ಕಳಿಗೆ ಮತ್ತು ಯುವ ಜನತೆಗೆ ಗಣಕಯಂತ್ರ ಶಿಕ್ಷಣ, ಕೌಶಲ್ಯ ತರಬೇತಿ, ಮುಖಂಡತ್ವ ತರಬೇತಿ, ಸಣ್ಣ ಕೈಗಾರಿಕೆ, ಗೃಹ ಉತ್ಪಾದನೆ ಅರಿವು ಮೂಡಿಸುವುದು ಪ್ರಮುಖವಾಗಿದೆ. ಮಹಿಳಾ ಸಂಘಗಳನ್ನು ಸಂಘಟಿಸುವುದು. ಮಹಿಳೆಯರಿಗೆ ಅಗತ್ಯ ಇರುವ ತರಬೇತಿಗಳನ್ನು ಏರ್ಪಡಿಸಿ ಮಹಿಳಾ ಸಬಲೀಕರಣಕ್ಕೆ ಸಹಕರಿಸುವುದು. ಸಾಂಸ್ಕೃತಿಕ, ಜನಪದ ಕಲೆಯನ್ನು ರಕ್ಷಿಸಲು ಹಾಗೂ ಪ್ರೋತ್ಸಾಹಿಸಲು ನಾಟಕ, ಬೀದಿನಾಟಕ, ಜನಪದ ಗೀತೆ, ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಸಮ್ಮೆಳನಗಳನ್ನು ಆಯೋಜಿಸಿ ಪ್ರೋತ್ಸಾಹಿಸುವದು. ಲೇಖಕರು, ಕವಿ, ಗಾಯಕರೊಂದಿಗೆ ಶೀಬಿರ ನಡೆಸಿ ಪ್ರೋತ್ಸಾಹಿಸಿವುದು ಸೇರಿದೆ. ಸಾಮಾಜಿಕ ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ, ಕ್ರೀಡೆಯನ್ನು ಪ್ರೋತ್ಸಹಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ರಚಿಸಿಕೊಳ್ಳಲಾಗಿದೆ. ಈ ಸದ್ದುದ್ದೇಶಕ್ಕಾಗಿ ಊರಿನ ಗಣ್ಯ ವ್ಯಕ್ತಿಗಳಿಂದ, ಶಾಸಕರು, ಸಂಸದರು, ಮಂತ್ರಿಗಳು ಹಾಗೂ ಊರಿನ ಪ್ರಮುಖರಿಂದ ಸಹಾಯ ಧನ ಪಡೆಯುವುದು ಅಗತ್ಯವಾಗಿದೆ.

ಗೊಂಬೆಯಾಟದ ಪ್ರದರ್ಶನಗಳು

ನಮ್ಮ ಸಂಸ್ಥೆಯು ಗೊಂಬೆಯಾಟಕ್ಕೆ ಸಂಬಂಧಿಸಿದ ಅನೇಕ ಪ್ರಯೋಗಗಳನ್ನು ಪ್ರದರ್ಶಿತ್ತಿದೆ. ಅದರಲ್ಲಿ ಮುಖ್ಯವಾಗಿ ಮೂರುಭಾಗಗಳನ್ನು ಮಾಡಲಾಗಿದೆ.

ಶೈಕ್ಷಣಿಕ ವಿಭಾಗಕ್ಕೆ ಸಂಬಂಧಿಸಿದ ಗೊಂಬೆಯಾಟಗಳು:

ಜಾಗತಿಕ ತಾಪಮಾನ, ಪರಿಸರದ ಪರಿಚಯ, ಪರಿಸರ ಸಂರಕ್ಷಣೆ, ನಮಗೆಷ್ಟು ಗೊತ್ತು ಭೂಮಂಡಲದ ಪರಿಚಂiÀ? ನಮ್ಮ ದೇಹದೊಳಗೇನಿದೆ? ಕಾಡಿನ ಸಂರಕ್ಷಣೆ ಏಕೆ? ಇಂಗ್ಲೀಷ ಡೈಲಾಗ್ ಪರಿಚಯ, ಗಣಿತ ಅಧ್ಯಯನ, ಪ್ಲಾಸ್ಟಿಕಾಸುರ, ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನೀಡುತ್ತಿದೆ ಆಸಕ್ತ ಶಿಕ್ಷಕರಿಗೆ ತರಬೆತಿಯನ್ನು ನಿಡುತ್ತಿದೆ.

ಸಾಮಾಜಿಕ ವಿಭಾಗಕ್ಕೆ ಸಂಬಂಧಿಸಿದ ಗೊಂಬೆಯಾಟಗಳು:

ಸಮಾಜಿಕವಾಗಿ ಜನರಿಗೆ ಮನರಂಜನೆಯನ್ನು ನೀಡಲು ವಿವಿಧ ಪ್ರದರ್ಶನಗಳನ್ನು ನೀಡುತ್ತಿದ್ದೇವೆ. ಅದರಲ್ಲಿ ಮುಖ್ಯವಾಗಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಮತ್ತು ದುಶ್ಚಟಗಳ ನಿರ್ಮೂಲನೆಯ ಕುರಿತಾದ ಮತ್ತು ಮೂಡನಂಬಿಕೆಗಳ ಸಮಾಜದ ಅಸಮಾನತೆ ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ, ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ನಿಡುತ್ತಿದೆ.

ಸಾಂಸ್ಕೃತಿಕ ವಿಭಾಗಕ್ಕೆ ಸಂಬಂಧಿಸಿದ ಗೊಂಬೆಯಾಟಗಳು:

ನಮ್ಮ ದೇಶದ ಇತಿಹಾಸ ಪರಂಪರೆಯನ್ನು ಬಿಂಬಿಸುವ ರಾಮಾಯಣ ಮಹಾಭಾರತದ ವಿವಿಧ ಪ್ರಸಂಗಗಳನ್ನು ಗೊಂಬೆಯಾಟದ ಮೂಲಕ ಪ್ರದರ್ಶಿಸುತ್ತಿದ್ದೆವೆ, ಐತಿಹಾಸಿಕ ಮಹಾಪುರುಷರ ಸಂದೇಶಗಳನ್ನು ತಿಳಿಸುವ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ.

ಸಂಸ್ಥೆಯ ಮುಖ್ಯ ಉದ್ದೇಶಗಳು

ಸಂಪರ್ಕ ವಿಳಾಸ:

ಶ್ರೀಮತಿ ಸುಜಾತಾ ಸಿ ಬಿರಾದಾರ
ಅಧ್ಯಕ್ಷರು

ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ (ರಿ) ಹಳಿಯಾಳ
ರಂಜಲ್ ಕಾಂಪ್ಲೆಕ್ಸ್ ಎರಡನೇ ಮಹಡಿ. ಅಂಚೆ ಕಛೇರಿ ಹತ್ತಿರ
ಮಾರುತಿಗಲ್ಲಿ ಹಳಿಯಾಳ.ಉತ್ತರ ಕನ್ನಡ ಜಿಲ್ಲೆ 581329
info@hongiranapuppets.org
+91 99456 94642, +91 94802 68131