ನಮ್ಮ ಸಂಸ್ಥೆ ಈ ಕೆಳಗಿನ ಗೊಂಬೆಯಾಟಗಳನ್ನು ಪ್ರದರ್ಶನ ನೀಡುತ್ತಿದೆ.

ಸೂತ್ರದ ಗೊಂಬೆಯಾಟ:(String puppets)

ಸೂತ್ರದ ಗೊಬೆಯಾಟದಲ್ಲಿ ಅನೇಕ ಪ್ರಸಂಗಗಳನ್ನು ನೀಡುತ್ತಿದೆ. ಇತಿಹಾಸ ಪರಂಪರೆಯನ್ನು ತಿಳಿಸುವ ರಾಮಾಯಣದ ಸೀತಾಪಹರಣ ಸನ್ನಿವೇಶವನ್ನು, ಮಹಾಭಾರತದಲ್ಲಿ ಏಕಲವ್ಯನ ಗುರುಭಕ್ತಿ, ಪ್ರಸ್ತುತ ಸಾಮಾಜದಲ್ಲಿ ನಡೆಯುವ ಅನೇಕ ಸನ್ನಿವೇಶಗಳನ್ನು, ಜನಪದ ಆಚರಣೆಗಳ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿಸುವ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ಲಾಸ್ಟಿಕಾಸುರ ಎಂಬ ಸೂತ್ರದ ಗೊಂಬೆಯಾಟದ ಪ್ರಸಂಗಗಳನ್ನ ಪ್ರದರ್ಶಿಸುತ್ತಿದೆ.

ಕಡ್ಡಿಗೊಂಬೆ : (Rod puppets)

ಕಡ್ಡಿಗೊಂಬೆಯಾಟದಲ್ಲಿ “ಬೆಳಕು ಹಂಚಿದ ಬಾಲಕ” ಎಂಬ ಗೌತಮ ಬುದ್ಧನ ಸಂದೇಶ ಸಾರುವ ಹಾಗೂ ಡಾ|| ಬಿ ಆರ್ ಅಮಬೆಡ್ಕರ್ ರವರ ವಿಚಾರ ಧಾರೆಗಳನ್ನು ಬಿಂಬಿಸುವ ಗೊಂಬೆಯಾಟ. ಈ ಪ್ರದರ್ಶನ ಮಧ್ಯಪ್ರದೇಶದ ಅಮರಕಂಟಕ ವಿಶ್ವ ವಿಧ್ಯಾಲಯದಲ್ಲಿ ಪ್ರದರ್ಶನಗೊಂಡಿದೆ.

ಸರ್ವಧರ್ಮದವರಿಗೆ ಭಗವಂತ ಒಬ್ಬನೆ ಎಂಬ ಸಂದೇಶ ಸಾರುವ ರಾಷ್ಟ್ರೀಯ ಭಾವೈಕ್ಯತೆಯನ್ನು ಬಿಂಬಿಸುವ ಕಡ್ಡಿಗೊಂಬೆಯಾಟ
ಮಹಾಭಾರತದ ಪ್ರಸಂಗವನ್ನು ಮತ್ತು ಇತಿಹಾಸವನ್ನು ನೆನಪಿಸುವ ಮತ್ತು ಪರಂಪರೆಯನ್ನು ಮರುಕಳಿಸುವ ಗೊಂಬೆಯಾಟ

ಕೀಲು ಗೊಂಬೆಯಾಟ

ಕರ್ನಾಟಕದ ಪ್ರತೀಕವಾದ ಪುಣ್ಯಕೋಟಿಯ ಕಥೆಯನ್ನು ಮತ್ತು ಜಾಣ ಮೊಲ ಎಮಬ ಗೊಂಬೆಯಾಟವನ್ನು ಪ್ರದರ್ಶಿಸುತ್ತೇವೆ.

ಕೈ ಗೊಂಬೆಯಾಟ (Glove puppets)

ಕೈಗೊಂಬೆಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತೇವೆ. ಅದರಲ್ಲಿ ಮುಖ್ಯವಾಗಿ ಜಾಗತಿಕ ತಾಪಮಾನ ಪರಿಸರದ ಪರಿಚಯ ಹಾಗೂ ಪರಿಸರ ಸಂರಕ್ಷಣೆಯ ಬೆಯಾಟವನ್ನು ಮತ್ತು ಪರಿಸರದ ಪರಿಚಯವನ್ನು ನೀಡುತ್ತೆವೆ.

ಕಿರಿಟ ಗೊಂಬೆಗಳು

ಇದರಲ್ಲಿ ಪರಿಸರ ಜಾಗೃತಿ ಮೂಡಿಸುವ ಕಿರಿಟ ಗೊಂಬೆಯಾಟಗಳನ್ನು ಮಾಡುತ್ತೇವೆ.

ಬೆರಳು ಗೊಂಬೆಗಳು (Finger puppets)

ಮಕ್ಕಳ ಮನರಂಜನೆಗಾಗಿ ಕೆಲವು ಬೆರಳು ಗೊಂಬೆಗಳನ್ನು ಬಳಸುತ್ತಿದ್ದೆವೆ.