ಹೊಂಗಿರಣ ಸಂಸ್ಥೆ ಸ್ಥಾಪನೆಯಾಗಿ ಅನೇಕ ವರ್ಷಗಳಿಂದ ಸಮಾಜದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿ, ಪರಂಪರೆಯನ್ನು ಸಂರಕ್ಷಣೆ ಮಾಡುತ್ತಾ ಬಂದಿದೆ. ಅನೇಕ ಕಲಾವಿದರಿಗೆ ಸನ್ಮಾನಗಳನ್ನು ನೀಡುತ್ತಾ ಅವರ ಸೇವೆಗೆ ಸ್ಪೂರ್ತಿ ನೀಡಿದೆ.
ಮುಖ್ಯವಾಗಿ ನಮ್ಮ ಸಂಸ್ಥೆ ಗೊಂಬೆಯಾಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಾ ಜನ-ಮನವನ್ನು ರಂಜಿಸಿದೆ. ದೂರದರ್ಶನ ಚಂದನ ವಾಹಿನಿಯಲ್ಲಿ, ಚಿಂಟು ಟಿ ವಿ ಯಲ್ಲಿ ಸ್ಥಳೀಯ ಚಾನಲ್‍ಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಪ್ರತಿಷ್ಟಿತ ಹಂಪಿ ಉತ್ಸವ, ಹೊರನಾಡು ಉತ್ಸವ,ಕರಾವಳಿ ಉತ್ಸವ, ಕದಂಬೋತ್ಸವ, ಮಲೆನಾಡ ಉತ್ಸವ ಹೀಗೆ ಅನೇಕ ಕಡೆ ಕಾರ್ಯಕ್ರಮಗಳನ್ನು ನೀಡಿದ್ದೇವೆ.
ನಮ್ಮ ಗೊಂಬೆಯಾಟದಲ್ಲಿ ಪರಿಸರ ಸಂರಕ್ಷಣೆಯ ಕುರಿತಾದ, ಪ್ಲಾಸ್ಟಿಕಾಸುರ, ಜಾಗತಿಕ ತಾಪಮಾನ, ಐತಿಹಾಸಿಕ ಪ್ರಸಂಗಗಳನ್ನು, ಸ್ವಾತಂತ್ರ್ಯ ಚಳುವಳಿಗಳನ್ನ, ಪುಣ್ಯಕೋಟಿಯ ಕಥೆಯನ್ನು ರಾಮಾಯಣದ ಮತ್ತು ಮಹಾಭಾರತದ ಸನ್ನಿವೇಶಗಳನ್ನು, ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಗೂ ಸಾಮಾಜಿಕ ಪ್ರಸ್ತುತ ಪ್ರಸಂಗಗಳನ್ನು 10 ನಿಮಿಷದಿಂದ 1 ಘಂಟೆಯ ವರೆಗೆ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತೇವೆ.
ಗೊಂಬೆಯಾಟದ ಪ್ರದರ್ಶನಗಳನ್ನು , ಆಸ್ಸಾಂನ ಗುವ್ಹಾಟಿಯಲ್ಲಿ, ದೆಹಲಿಯಲ್ಲಿ, ಗೋವಾದ ಪಣಜಿಯಲ್ಲಿ. ಹರಿಯಾಣದ ಗುರುಗಾಂವನಲ್ಲಿ, ತಮಿಳುನಾಡಿನಲ್ಲಿ, ಆಂದ್ರದೇಶದ ಹೈದರಾಬಾದಿನಲ್ಲಿ ಕೇರಳದ ಕಾಸರಗೋಡನಲ್ಲಿ ಮಣಿಪುರದ ಇಂಫಾಲ್‍ನಲ್ಲಿ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹೀಗೆ ದೇಶದ ನಾನಾಕಡೆ ಕಾರ್ಯಕ್ರಮಗಳನ್ನು ನೀಡಿದ್ದೇವೆ.
ನಮ್ಮ ಗೊಂಬೆಯಾಟದಲ್ಲಿ ಒಟ್ಟೂ 12 ಜನ ಕಲಾವಿದರಿರುತ್ತೇವೆ, ಸೂತ್ರದ ಗೊಂಬೆಗಳನ್ನು ಸಲಾಕೆ ಗೊಂಬೆಗಳನ್ನು . ಕೀಲುಗೊಂಬೆಗಳನ್ನು ಕೈಗೊಂಬೆಗಳನ್ನು ಬಳಸುತ್ತೇವೆ. ಅವಸಾನದ ಅಂಚಿನಲ್ಲಿ ಕಣ್ಮರೆಯಾಗುವ ಗೊಂಬೆಯಾಟದ ಕಲೆಯನ್ನು ಪರಿಚಯಿಸಲು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.