1). ಗ್ರಾಮದಲ್ಲಿ ಸಾಕ್ಷರ ಪ್ರಮಾಣ ಹೆಚ್ಚಿಸಿ ಸಂಪೂರ್ಣ ಸಾಕ್ಷರ ಗ್ರಾಮವನ್ನಾಗಿ ಮಾಡುವದು. ಶಾಲಾ ವಿದ್ಯಾರ್ಥಿಗಳಲ್ಲಿ ಮತ್ತು ಊರಿನ ಯುವಕರಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸುವದು ಬೇರೆ ಬೇರೆ ರೀತಿಯ ಕ್ರೀಡಾ ಆಸಕ್ತರಿಗೆ ಕ್ರೀಡಾ ಮಾರ್ಗದರ್ಶನವನ್ನು ನೀಡುವದು. ಗ್ರಾಮೀಣ ಕ್ರೀಡೆಗಳಾದ ಕಬ್ಬಡಿ, ಕುಸ್ತಿ, ಲಗೋರಿ, ಚಿನ್ನಿದಾಂಡು, ಗೋಣಿಚೀಲ ಮುಂತಾದ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು. ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗಾಗಿ ಕ್ರೀಡಾ ಶಾಲೆಗಳನ್ನು ತೆರೆಯುವದು. ಕ್ರೀಡಾಪಟುಗಳಲ್ಲಿ ರಾಜ್ಯ, ರಾಷ್ಟ್ರ, ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರಶಸ್ತಿಗಳ ಅರಿವು ಮೂಡಿಸುವುದು. ಕ್ರೀಡೆಯಲ್ಲಿ ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳಿಗೆ ಕ್ರೀಡಾಶಾಲೆಗಳ ಮಾಹಿತಿ ಮತ್ತು ಸಹಾಯ ಒದಗಿಸುವದು.

2). ದುಶ್ಚಟಗಳು ಇಂದು ಯುವ ಪೀಳಿಗೆಯನ್ನು ನಾಶಪಡಿಸುವ ಮಾರಕ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವದು ಇದರ ಅರಿವು ಮೂಡಿಸಿ ಯುವಪೀಳಿಗೆಯನ್ನು ಉತ್ತಮ ಮಾನವ ಸಂಪನ್ಮೂಲವಾಗಿ ಸದೃಢಗೊಳಿಸುವುದು.

3). ಕಲುಷಿತ ನೀರು, ಮತ್ತು ಇತರೆ ವಿಷಕಾರಿ ವಸ್ತುಗಳ ಸೇವೆಯಿಂದ ಜನರಲ್ಲಿ ಅನಾರೋಗ್ಯ ಸಮಸ್ಯೆ ತಲೆ ದೂರುತ್ತಿದ್ದು ಅನಾರೋಗ್ಯಕ್ಕೆ ಒಳಗಾಗದಂತೆ ತಡೆಗಟ್ಟಲು ಆರೋಗ್ಯ ಅರಿವು ಮತ್ತು ಆರೋಗ್ಯ ಶಿಕ್ಷಣವನ್ನು ಒದಗಿಸುವದು.

4). ಗ್ರಾಮೀಣ ನೈರ್ಮಲ್ಯದಂತಹ ಸರಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಲುವುದು. ಇತ್ತೀಚಿನ ದಿನಗಳಲ್ಲಿ ಜನ ಪಾಶ್ಚಾತ್ಯ ಸಂಸ್ಕೃತಿ ಮತ್ತು ಮಾರಕ ಚಟುವಟಿಯನ್ನು ಆಕರಿಸಿಕೊಂಡು ನೈತಿಕ ಮೂಲ್ಯಗಳನ್ನು ಕಡೆಗಣಿಸುತ್ತಿದ್ದು ಅವರಲ್ಲಿ ನೈತಿಕ ಮೌಲ್ಯವನ್ನು ವೃದ್ಧಿಸುವ ಸಲುವಾಗಿ ವಿವಿಧ ಮೌಲ್ಯ ಶಿಕ್ಷಣದ ಕಾರ್ಯಗಾರವನ್ನು ಹಮ್ಮಿಕೊಳ್ಳುವುದು.

5). ನೈತಿಕ ಮೌಲ್ಯದ ಅಭಿವೃದ್ಧಿಸಲುವಾಗಿ ರಾಷ್ಟ್ರ ಪುರುಷರ ವಿಚಾರವನ್ನು ಪ್ರಚಾರ, ಪ್ರಸಾರ ಮಾಡಲು ಅವವರ ಪುತ್ಥಳಿಯನ್ನು ಸ್ಥಾಪನೆ ಹಾಘೂ ರಕ್ಷಣೆ ಮಾಡುವುದು. ಸ್ವಾಮಿ ವಿವೇಕಾನಂದ ಶ್ರೀ ಛತ್ರಫತಿ ಶಿವಾಜಿ ಮಹಾರಾಜ, ಮಹಾತ್ಮ ಗಾಂಧಿಜಿ, ಲಾಲಬಹದೂರಶಾಸ್ತ್ರಿ, ಪಂಡಿತ ಜವಾಹರಲಾಲ ನೆಹರು, ಸುಭಾಸ ಚಂದ್ರಬೋಸ, ಭಗತಸಿಒಘ್, ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಡಾ. ಬಿಹಾರ ಅಂಬ್ಡೇಕರ, ಮೊದಲಾದ ಮಹಾಪುರುಷರ ಜಯಂತಿಗಳು ಮತ್ತು ಸ್ಮøತಿ ದಿನದ ಆ ಯೋಜನೆ ಆಚರಿಸುವದು.

6). ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸುವ ಸಲುವಾಗಿ ವಿವಿಧ ರೀತಿಯ ಶೈಕ್ಷಣಿಕ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಗ್ರಾಮೀಣ ಭಾಗಗಲ್ಲಿ ಶಾಲಾ, ಕಾಲೇಜುಗಳನ್ನು ತೆರೆಯುವದು. ಶೈಕ್ಷಣಿಕ ಅಭಿವೃದ್ಧಿ, ವೃತಿ ಮಾರ್ಗದರ್ಶನ ತರಬೇತಿ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಶಿಕ್ಷಣ ಮುಂದವರಿಕೆಗೆ ಸಹಾಯ, ಶಿಷ್ಯವೇತನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು.

7). ಸಂಸ್ಥೆಯ ಹೆಸರಿನಲ್ಲಿ ವೃತ್ತಿ ತರಬೇತಿ ಕೇಂದ್ರ ಸ್ಥಾಪಿಸುವುದು. ಸಂಸ್ಥೆ ಹೆಸರಿನಲ್ಲಿ ಚರಾಸ್ತಿ ಹಗೂ ಸ್ಥಿರಾಸ್ತಿಗಳನ್ನು ಹೊಂದವುದು ಸಂಸ್ಥೆಯು ಶಿಕ್ಷಣ ಸಂಸ್ಥೆಗೆ ಊರರಿನ ಗಣ್ಯ ವ್ಯಕ್ತಿಗಳಿಂದ, ಶಾಸಕರು, ಸಂಸದರು, ಮಂತ್ರಿಗಳು ಹಾಗೂ ಊರಿನ ಪ್ರಮುಖರಿಂದ ಸಹಾಯ ಧನ ಪಡೆಯುವುದು.

8). ಮಕ್ಳಿಗೆ ಹಾಘೂ ಯುವಕರಿಗಾಗಿ ಗಣಕಯಂತ್ರ ಶಿಕ್ಷಣ ಹಾಗೂ ಟ್ಯೂಶನ್ ವರ್ಗಗಳನ್ನು ತೆರೆಯುವುದು. ಮಹಿಳಾ ಸಂಘಟನೆಗಳನ್ನು ಸ್ಥಾಪಿಸಿ ತನ್ಮೂಲಕ ಸಾಮಾಜಿಕ ಅಭಿವೃದ್ಧಿಗೆ ಕೈ ಜೋಡಿಸುವುದು. ದೈಹಿಕ ವ್ಯಾಯಾಮ ಶಾಲೆ, ತರಬೇತಿ ಅದಕ್ಕೆ ಪೂರಕವಾಗಿ ಬೇಕಾಗುವ ಸಲಕರಣೆ ಕಟ್ಟಡ ಕಟ್ಟಲು ಸರಕಾರದಿಂದ ಹಾಗೂ ಸಂಘ ಸಂಸ್ಥೆಗಳಿಂದ, ದಾನಿಗಳಿಂದ ನಿಧಿ ಸಂಗ್ರಹಿಸುವುದು ದೈಹಿಕ ಸ್ಫರ್ಧೆ ಏರ್ಪಡಿಸುವುದು ಹಾಗೂ ಪ್ರೋತ್ಸಾಹಿಸುವುದು.

9). ಸಾಂಸ್ಕೃತಿಕ, ಜನಪದ ಕಲೆಯನ್ನು ರಕ್ಷಿಸಲು ಹಾಗೂ ಪ್ರೋತ್ಸಾಹಿಸಲು ನಾಟಕ, ಬೀದಿನಾಟಕ, ಜನಪದ ಗೀತೆ, ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಸಮ್ಮೆಳನಗಳನ್ನು ಆಯೋಜಿಸಿ ಪ್ರೋತ್ಸಾಹಿಸುವದು.

10). ಲೇಖಕರು, ಕವಿ, ಗಾಯಕರು, ಇತ್ಯಾದಿ ಶೀಬಿರ ನಡೆಸಿ ಪ್ರೋತ್ಸಾಹಿಸಿ ಸಮಾಜ ಸುಧಾರಿಸುವುದು ರಾಷ್ಟ್ರೀಯ ಜನಜಾಗೃತಿ, ರಾಷ್ಟ್ರೀಯ ವಿಕಾಸ ಕಾರ್ಯಕ್ರಮಗಳು ಜನರ ಸಹಯೋಗ ಹೆಚ್ಚಿನ ಪ್ರಮಾಣದಲ್ಲಿ ನಡೆಯಲು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸಾರ್ವಜನಿಕರ, ಮೂಡನಂಬಿಕೆ, ಬಾಲ್ಯ ವಿಕಾಸ ಕಲ್ಯಾಣ ಹಾಗೂವ್ಯಸನ ಬಿಡುವುದು ಹಾಗೂ ಗ್ರಾಮ ಸ್ವಚ್ಛತೆಯ ಅಭಿಯಾ ಚರ್ಚಾಕೂಟ ಏರ್ಪಡಿಸುವುದು.

11). ಸರ್ಕಾರದಿಂದ ಲಭ್ಯವಿರುವ ಔಷಧಿ ಹಾಗೂ ವನಸ್ಪತಿ ಗಿಡಗಳ ನೆಡುತೊಪು ಬಗ್ಗೆ ರೈತರಿಗೆ ಮಾಹಿತಿ ಒದಗಿಸುವುದು ಮತ್ತು ಪ್ರೋತ್ಸಾಹಿಸುವುದು ಅದಕ್ಕಾಗಿ ಚರ್ಚೆ ಹಾಗು ಮಾರ್ಗದರ್ಶನ ಶೀಬಿರ ನಡೆಸುವುದು.

12). ಹೈನುಗಾರಿಕೆ, ಜೇನು ಸಾಕಾಣಿಕೆ, ಕುರಿಸಾಕಾಣಿಕೆ, ಕೋಳಿ ಸಾಕಾನಿಕೆ ಮತ್ತು ಮತ್ಸೋದ್ಯಮಗಳ ಬಗ್ಗೆ ಅರಿವು ಮೂಡಿಸಿ, ಇದರಿಂದ ಸಿಗುವ ವ್ಯವಹಾರದ ಬಗ್ಗೆ ಮಾಹಿತಿ ಹಾಗೂ ಸಂಬಂಧಿಸಿದ ವೈದ್ಯರಿಂದ ಸಲಹೆ ಸೂಚನೆಗಳನ್ನು ಹಘಊ ಚರ್ಚಾ ಶೀಬಿರ ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವುದು.

13). ಸಾಮಾಜಿಕ, ಆರ್ಥಿಕ ಸ್ಥಿತಿ ಪ್ರಗತಿ ಮಾಡಲು ಸಣ್ಣ ಉಳಿತಾಯದ ಬಗ್ಗೆ ಮಾಹಿತಿಕೊಡುವುದು ಹಾಗೂ ಸದೃಢ ಪಡಿಸುವುದು. ಉಳಿತಾಯದಿಂದ ಸಣ್ಣ ಕೈಗಾರಿಕೆ, ಗೃಹ ಉತ್ಪಾದನೆ ಬಗ್ಗೆ ಸಹಕರಿಸುವುದು. ಮತ್ತು ಕಾರ್ಯಕ್ರಮವನ್ನು ಆಯೋಜಿಸುವುದು.ಅಗತ್ಯವಿದ್ದಲ್ಲಿ ಮಂಡಳದ ವತಿಯಿಂದ ಸಣ್ಣ ಉಳಿತಾಯ ಬ್ಯಾಂಕನ್ನು ಸ್ಥಾಪಿಸುವುದು. ಒಂದು ವೇಳೆ ಸಂರ್ಸತೆಯನ್ನು ಇಂತಹದ್ದೆ ಗುರಿ ಉದ್ದೇಶಗಳನ್ನು ಹೋಂದಿರುವ ಬೇರೊಂದು ಸಂಸ್ಥೆಯೊಡನೆ ಹೊಂದಾಣಿಕೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು. ಕುಷ್ಠರೋಗಿಯ ರೋಗ ನಿವಾರಣೆ ಮಾಡುವುದು ಮತ್ತು ಪುನರ್ವಸತಿ ನಿರ್ಮಿಸುವುದು. ಮಹಿಳಾ ಸಂಘಗಳು ಸಂಘಟಿಸುವುದು. ಸಂಘಟನೆಯ ಕೌಶಲ್ಯ ತರಬೇತಿ, ಮುಖಂಡತ್ವ ತರಬೇತಿ, ಮಹಿಳೆಯರಿಗೆ ಅಗತ್ಯ ಇರುವ ತರಬೇತಿಗಳನ್ನು ಏರ್ಪಡಿಸಿ ಮಹಿಳಾ ಸಬಲೀಕರಣಕ್ಕೆ ಸಹಕರಿಸುವುದು.

14). ನೀರಿನ ಸದುಪಯೋಗ ಹಾಗೂ ಸರಬರಾಜು ಯೋಜನೆ ಬಗ್ಗೆ ಮಾಹಿತಿ ನೀಡುವುದು ಸರಕಾರ ಹಾಘೂ ಅರೆ ಸರಕಾರ ಸಂಸ್ಥೆಗಳಿಂದ ಬರುವ ಅನುದಾನಗಳನ್ನು ವಿವಿಧಯೋಜನೆಗೆ ಒಳಪಡಿಸುವುದು. ಮಂಜೂರಾತಿಯಾದ ಎಲ್ಲ ತರಹದ ಕಾಮಗಾರಿಗಳನ್ನು ಗುತ್ತಿಗೆ ಹಿಡಿಯುವುದು. ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಬರುವ ಅನುದಾನಗಳನ್ನು ಸಂಸ್ಥೆಯ ಅಭಿವೃದ್ಧಿಗೆ ಉಪಯೋಗಿಸಿಕೊಳ್ಲುವುದು.